ಸ್ಟೀಫನ್ ಎಡ್‍ಬರ್ಗ್
	1966-ಸ್ವೀಡನ್ನಿನ ಟೆನಿಸ್ ಆಟಗಾರ. 1966 ಜನವರಿ 19ರಂದು ಜನಿಸಿದ. ತಾಯಿ ಅನೆಟ್ ಎಡ್‍ಬರ್ಗ್. 6 ಪ್ರಮುಖ ಪಂದ್ಯಗಳೂ ಸೇರಿದಂತೆ 41 ಸಿಂಗಲ್ಸ್ ಪ್ರಶಸ್ತಿಗಳನ್ನೂ 18 ಡಬಲ್ಸ್ ಪ್ರಶಸ್ತಿಗಳನ್ನೂ ಗಳಿಸಿದ್ದಾನೆ. 1990-91ರ ಸೀಸನ್‍ನಲ್ಲಿ ನಂ.1 ಆಟಗಾರನಾಗಿದ್ದ. ಗ್ರಾಂಡ್ ಸ್ಲಾಮ್ (1983), ಮಿಲಾನ್ ಓಪನ್ (1984), ಸ್ಯಾನ್‍ಫ್ರಾನ್ಸಿಸ್ಕೋ ಓಪನ್ (1985), ಬ್ಯಾಸ್ಲೆ ಅಂಡ್ ಮೆಂಫಿಸ್ ಓಪನ್ (1986), ಆಸ್ಟ್ರೇಲಿಯನ್ ಓಪನ್(1987), ವಿಂಬಲ್ಡನ್ ಪ್ರಶಸ್ತಿಗಳನ್ನು ಗೆದ್ದಿದ್ದಾನೆ (1988). ಅನಂತರ ಸ್ವೀಡಿಷ್ ಡೇವಿಸ್ ಕಪ್ ತಂಡದ ಆಟಗಾರನಾಗಿದ್ದ (1984-87) ತರುವಾಯ ವಿಂಬಲ್ಡನ್ ಫೈನಲ್ ತಲುಪಿದ (1989). ಜರ್ಮನ್ ಓಪನ್ ಮತ್ತು ಯು.ಎಸ್. ಓಪನ್ ಪ್ರಶಸ್ತಿ ಪಡೆದ (1992). ಅದೇ ವರ್ಷ ಮಾಸ್ಟರ್ಸ್, ಫ್ರೆಂಚ್ ಓಪನ್ ಪ್ರಶಸ್ತಿಗಳನ್ನೂ ಪಡೆದ. 5 ಬಾರಿ ಅಮೆರಿಕನ್ ಟೆನಿಸ್ ಪ್ಲೇಯರ್ಸ್ ಸ್ಪೋಟ್ರ್ಸ್‍ಮನ್‍ಷಿಪ್ ಪ್ರಶಸ್ತಿ ಗಳಿಸಿ ದಾಖಲೆ ಸ್ಥಾಪಿಸಿದ. ಇದರಿಂದ ಈ ಪ್ರಶಸ್ತಿಗೆ ಇವನ ಹೆಸರನ್ನೇ ಇಡಲಾಗಿದೆ. ತರುವಾಯ ವೃತ್ತಿಪರ ಆಟದಿಂದ ನಿವೃತ್ತಿಹೊಂದಿದ (1996).		
	(ಡಿ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ